Index   ವಚನ - 1476    Search  
 
ಲಿಂಗ ಜಂಗಮವೆಂಬ ಸಕೀಲವ ಅರಿದು, ಲಿಂಗಾರ್ಚನೆ ಜಂಗಮಾರ್ಚನೆಯ ಮಾಡಲು ಆ ಲಿಂಗ ಜಂಗಮದೊಳಡಗಿ, ಆ ಜಂಗಮ ಪರಾಪರವೆಂದರಿದು ತೋರಿದ ಬಸವಣ್ಣನು. ಆ ಜಂಗಮವೆಂಬ ಘನವು ನಿಮ್ಮೊಳಡಗಿದ ಕಾರಣ, ಗುಹೇಶ್ವರಾ, ನಿಮ್ಮ ಅನುವನರಿದು ಸಂಗನಬಸವಣ್ಣನು ತನ್ನ ಪ್ರಸಾದವನಿಕ್ಕಿದಡೆ ನಿಮ್ಮ ಪ್ರಮಥರೆಲ್ಲರು ಜಯ ಜಯ ಎನುತಿರ್ದರಾಗಿ, ನಾನು ಸಂಗನ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.