ವಚನ - 1503     
 
ವಿಭೂತಿ, ಆವ ಭೂಷಣದೊಳಗು? ಪುಲಿಯ ಚರ್ಮ ಆವ ವಸ್ತ್ರದೊಳಗು? ಖಟ್ವಾಂಗ ಆವ ಆಯುಧದೊಳಗು? ನೀ ಇಡುವುದು ಇಂತುಟು, ನೀ ಹೊದೆವುದು ಇಂತುಟು ನೀ ಹಿಡಿವುದು ಇಂತುಟು, ನೀ ಕೊಡುವುದು ಇಂದ್ರಪದವಿ ಗುಹೇಶ್ವರಾ.