Index   ವಚನ - 1522    Search  
 
ಶೂಲದ ಮೇಲಣ ತಲೆಯ ವೈಭೋಗವನಾರು ಬಯಸಿದಡೆಲ್ಲಿಯದು? ಉಂಬಡೆ ಒಡಲಿಲ್ಲ, ಲಿಂಗಾರ್ಚನೆಯಿಲ್ಲ, ಅಂಗಭೋಗಕ್ಕೆ ಕರಚರಣಂಗಳಿಲ್ಲ. ಅಂಗವಿಲ್ಲೆಂಬ ಮಾತು ನಿಮಗೇಕೆ? ಸುಡು, ಭಂಗ. ಲಿಂಗ ನಿರಾಳ ಗುಹೇಶ್ವರಾ.