ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು
ಪುನರ್ಜಾತನಂ ಮಾಡಿದ ಬಳಿಕ,
ಪಂಚಭೂತಕಾಯವ ಕಳೆದು
ಪ್ರಸಾದಕಾಯವ ಮಾಡಿದ ಬಳಿಕ,
ವಾಯುಪ್ರಾಣಿಯ ಕಳೆದು
ಲಿಂಗಪ್ರಾಣಿಯ ಮಾಡಿದ ಬಳಿಕ,
ಎಲ್ಲಿಯ ಕುಲಸೂತಕ, ಎಲ್ಲಿಯ ಛಲಸೂತಕ?
ಎಲ್ಲಿಯ ತನುಸೂತಕ ಎಲ್ಲಿಯ ಮನಸೂತಕ?
ಎಲ್ಲಿಯ ನೆನಹುಸೂತಕ ಎಲ್ಲಿಯ ಭಾವಸೂತಕ?
ಇವನೆಂತೂ ಹಿಡಿಯಲಾಗದು, ಸದ್ಭಕ್ತನು.
ಕುಲಸೂತಕವುಳ್ಳನ್ನಕ್ಕರ ಭಕ್ತನಲ್ಲ,
ಛಲಸೂತಕವುಳ್ಳನ್ನಕ್ಕರ ಮಹೇಶ್ವರನಲ್ಲ,
ತನುಸೂತಕವುಳ್ಳನ್ನಕ್ಕರ ಪ್ರಸಾದಿಯಲ್ಲ,
ಮನಸೂತಕವುಳ್ಳನ್ನಕ್ಕರ ಪ್ರಾಣಲಿಂಗಿಯಲ್ಲ,
ನೆನಹುಸೂತಕವುಳ್ಳನ್ನಕ್ಕರ ಶರಣನಲ್ಲ,
ಭಾವಸೂತಕವುಳ್ಳನ್ನಕ್ಕರ ಐಕ್ಯನಲ್ಲ,
ಇಂತೀ ಸೂತಕವ ಮುಂದುಗೊಂಡಿಪ್ಪವರ
ಮುಖವ ನೋಡಲಾಗದು ಗುಹೇಶ್ವರ.
Transliteration Śrīgurusvāmi śiṣyana pūrvāśrayamaṁ kaḷedu
punarjātanaṁ māḍida baḷika,
pan̄cabhūtakāyava kaḷedu
prasādakāyava māḍida baḷika,
vāyuprāṇiya kaḷedu
liṅgaprāṇiya māḍida baḷika,
elliya kulasūtaka, elliya chalasūtaka?
Elliya tanusūtaka elliya manasūtaka?
Elliya nenahusūtaka elliya bhāvasūtaka?
Ivanentū hiḍiyalāgadu, sadbhaktanu.
Kulasūtakavuḷḷannakkara bhaktanalla,
chalasūtakavuḷḷannakkara mahēśvaranalla,
tanusūtakavuḷḷannakkara prasādiyalla,
manasūtakavuḷḷannakkara prāṇaliṅgiyalla,
nenahusūtakavuḷḷannakkara śaraṇanalla,
bhāvasūtakavuḷḷannakkara aikyanalla,
intī sūtakava mundugoṇḍippavara
mukhava nōḍalāgadu guhēśvara.
Hindi Translation श्री गुरुस्वामि शिष्य के पूर्वाश्रय बिताकर
पुनर्जातबनाने के बाद,
पंचभूत काय बिताकर
प्रसाद काय बनाने के बाद,
वायु प्राणि को बिताकर
लिंग प्राणि बनाने के बाद,
कहाँ का कुल सूतक, कहाँ का छल सूतक,
कहाँ का तनु सूतक, कहाँ का मन सूतक,
कहाँ का याद सूतक, कहाँ का भाव सूतक,
इनको कभी मत अपनाना, सद्भक्तको।
कुल सूतक रहने तक भक्त नहीं,
छल सूतक रहने तक महेश्वर नहीं,
तनु सूतक रहने तक प्रसादी नहीं;
मन सूतक रहने तक प्राणलिंगी नहीं,
याद सूतक रहने तक शरण नहीं,
भाव सूतक रहने तक ऐक्य नहीं,
ऐसे सूतकों को सामने रखेहुओं का
मुख देखना मत गुहेश्वरा ।
Translated by: Eswara Sharma M and Govindarao B N