Index   ವಚನ - 1538    Search  
 
ಸಕಲವನೆಲ್ಲ ಲಿಂಗದೊಳಗೆ ತೋರಿದನು. ಆ ಲಿಂಗದ ಬೆಳಗ ಸಕಲದೊಳಗೆ ತೋರಿದನು. ಎನ್ನ ಮನಕ್ಕೆ ಅತಿಶಯವ ತೋರಿ ತೋರಿ ರಕ್ಷಿಸಿದನು. ಎನ್ನೊಳಗೆ ತನ್ನ ತೋರಿದನು, ತನ್ನೊಳಗೆ ಎನ್ನ ತೋರಿದನು. ಮತ್ತೆ ಎರಡುವನು ಏಕಮಾಡಿ ಎನ್ನೊಳಗೆ ಗುಹೇಶ್ವರನಾದನು, ಹೊರಗೆ ಮಹಾಲಿಂಗವಾಗಿ ನಿಂದನು, ಶ್ರೀಗುರುಲಿಂಗ ಬಸವಣ್ಣನು.