•  
  •  
  •  
  •  
Index   ವಚನ - 1550    Search  
 
ಸಮುದ್ರದೊಳಗೆ ನೊರೆ ತೆರೆಗಳು ನೆಗಳ್ದವೆಂದಡೆ ತಾ ಸಮುದ್ರದಿಂದ ಅನ್ಯವಪ್ಪವೆ? ನಿರ್ವಿಕಾರ ನಿತ್ಯ ನಿರಂಜನ ನಿರ್ಗುಣ ಪರಿಪೂರ್ಣ ನಿರ್ವಿಕಲ್ಪ ಪರಬ್ರಹ್ಮಶಿವನಿಂದ ಜಗತ್ತು ಉದಯಿಸಿತ್ತು ಎಂದಡೆ ಶಿವನಿಂದ ಅನ್ಯವೆನಬಹುದೆ? ಇಂತಪ್ಪ ಅರಿವು, ನೀವು ಕೊಟ್ಟ ಸಮ್ಯಕ್ ಜ್ಞಾನಕ್ಕೆ ಅರಿದಪ್ಪುದಯ್ಯಾ ಗುಹೇಶ್ವರಾ.
Transliteration Samudradoḷage nore teregaḷu negaḷdavendaḍe tā samudradinda an'yavappave? Nirvikāra nitya niran̄jana nirguṇa paripūrṇa nirvikalpa parabrahmaśivaninda jagattu udayisittu endaḍe śivaninda an'yavenabahude? Intappa arivu, nīvu koṭṭa samyak jñānakke aridappudayyā guhēśvarā.
Hindi Translation समुद्र में फेन लहरे रहेकहें तो वे खुद समुद्र से अन्य हैं क्या? निर्विकार, नित्य, निरंजन, निर्गुण, परिपूर्ण, निर्विकल्प, परब्रह्म शिव से जगत उदय हुआ था कहेंतो शिव से अन्य कह सकते? ऐसे ज्ञान, तुमसे दिये सम्यक ज्ञान को जान सकते गुहेश्वरा ? Translated by: Eswara Sharma M and Govindarao B N