ಸಾವನ್ನಕ್ಕರ ಶ್ರವವ ಮಾಡಿದಡೆ,
ಇನ್ನು ಕಾದುವ ದಿನವಾವುದು?
ಬಾಳುವನ್ನಕ್ಕರ ಭಜಿಸುತ್ತಿದ್ದಡೆ,
ತಾನಹ ದಿನವಾವುದು?
ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದಡೆ,
ನಿಜವನೆಯ್ದುವ ದಿನವಾವುದು?
ಕಾರ್ಯಕ್ಕೆ ಬಂದು, ಆ ಕಾರ್ಯ ಕೈಸಾರಿದ ಬಳಿಕ
ಇನ್ನು ಮರ್ತ್ಯಲೋಕದ ಹಂಗೇಕೆ?
ತನಿರಸ ತುಂಬಿದ ಅಮೃತಫಲ
ಒಮ್ಮಿಗೆ ತೊಟ್ಟುಬಿಡುವುದು ನೋಡಿರೆ, ದೃಷ್ಟಾಂತವ!
ಬಸವಣ್ಣ ಚೆನ್ನಬಸವಣ್ಣ ಮೊದಲಾದ ಪ್ರಮಥರು
ಗುಹೇಶ್ವರಲಿಂಗದಲ್ಲಿ ನಿಜವನೈದಿ ನಿಶ್ಚಿಂತರಾಗಿರಯ್ಯಾ.
Hindi Translationमरने तक साधन करे तो, और लडने का दिन कौनसा है?
जीवन भर भजन करे तो, आलाप का दिन कौनसा हैं?
अर्थ जानने तक अभ्यास करे तो, सच जानने का दिन कौनसा हैं
काम को आये, वह काम पूरा होने के बाद
औरमर्त्यलोक की परवाह क्यों ?
मिठास भरा अमृत फलएकदम टहने से,
गिरना देखिये, यही दृष्टांत ।
बसवण्णा, चेन्नबसवण्णा, आदि प्रमथ गुहेश्वर लिंग में निजैक्य बने निश्चिंत हुए हैं।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura