Index   ವಚನ - 190    Search  
 
ಆಧಾರ ಲಿಂಗ ನಾಭಿ ಹೃದಯ ಕಂಠ ಭ್ರೂಮಧ್ಯದ ಮೇಲೆ ನಿಂದುದದೇನೊ? ನಿತ್ಯ ನಿರಂಜನ ನಿರುಪಾಧಿಕರೇಖೆಯಾಗಿ, ಇರ್ದುದದೇನೊ? ವಿದ್ರುಮಕುಸುಮಚಕ್ಷು ಪರಿಮಳದಿಂದತ್ತತ್ತಲೆ ಗುಹೇಶ್ವರನೆಂಬುದದೇನೊ?