ತಲೆಯಲಟ್ಟುಂಬುದ,
ಒಲೆಯಲಟ್ಟುಂಬರು.
ಒಲೆಯಲಟ್ಟುಂಬದ,
ಹೊಟ್ಟೆಯಲುಂಬೈಸನಕ್ಕರ ಹೊಗೆ ಘನವಾಯಿತ್ತು.
ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ.
Art
Manuscript
Music Courtesy:
Video
TransliterationTaleyalaṭṭumbuda,
oleyalaṭṭumbaru.
Oleyalaṭṭumbada,
hoṭṭeyalumbaisanakkara hoge ghanavāyittu.
Ida kaṇḍu hēsibiṭṭenu guhēśvarā.
Hindi Translationसिर से पका खा कहें तो चूल्हे से पका खाते हैं।
चूल्हे में जो है उसे पेठ से खाते हैं।
धुआँ घन हुआ।
यह देख घृणित हुआ गुहेश्वरा।
Translated by: Eswara Sharma M and Govindarao B N
English Translation
Tamil Translationதலையில் அனுபவிப்பதை உலையிலனுபவிப்பர்!
உலையிலிருப்பதை வயிற்றால் அனுபவிப்பர் புகை அடர்ந்தது.
இதைக்கண்டு அருவருப்பெய்தினேன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅಟ್ಟುಂಬುದ = ಅನುಸಂಧಾನದಿಂದ ಅನುಭವಿಸುವುದನ್ನು; ಒಲೆಯಲಿ ಅಟ್ಟುಂಬರು = ಇಂದ್ರಿಯ ಮತ್ತು ವಿಷಯಗಳ ಸಂನಿಕರ್ಷದಿಂದ ಉಂಟಾಗುವ ವೈಷಯಿಕಸುಖವನ್ನುಅನುಭವಿಸುವರು; ಒಲೆಯಲುಳ್ಳುದು = ವಿಷಯದಲ್ಲಿ ಇರುವ ಸುಖವು; ಘನವಾಗು = ಹೆಚ್ಚಾಗು; ತಲೆಯಲಿ = ಉನ್ಮನಿ ಅವಸ್ಥೆಯಲ್ಲಿ; ಹೊಗೆ = ಭವದುಃಖದ ಸಂಕೇತ; ಹೊಟ್ಟೆಯಲಿ ಉಂಬುದು = ಆ ಸುಖವನ್ನು ಇಂದ್ರಿಯಗಳ ಮೂಲಕ ಅನುಭವಿಸುವುದು; Written by: Sri Siddeswara Swamiji, Vijayapura