ವಚನ - 324     
 
ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟೆವು, ಆಗಮ ಆಗುಹೋಗಲಿರಿಯದೆ ಕೆಟ್ಟವು. ಪುರಾಣ ಪೂರೈಸಲರಿಯದೆ ಕೆಟ್ಟೆವು. ಹಿರಿಯರು ತಮ್ಮ ತಾವು ಅರಿಯದೆ ಕೆಟ್ಟರು: ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು. ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ?