Index   ವಚನ - 363    Search  
 
ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮಜ್ಞಾನಿ ವೇಷಧಾರಿ, ಅತೀತಜ್ಞಾನಿ ಆರೂಢ. ಆರೂಢನನಾರೂ ಅರಿಯಬಾರದಯ್ಯಾ. ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ. ಈ ಚತುರ್ವಿಧದೊಳಗೆ ಆವಂಗವೂ ಅಲ್ಲ, ಗುಹೇಶ್ವರಾ-ನಿಮ್ಮ ಶರಣ.