ಇಲ್ಲವೆಯ ಮೇಲೊಂದು ಉಂಟೆಂಬ ಪರಿಭಾವ,
ಅಲ್ಲಿ ಇಲ್ಲಿ ಎನ್ನದೆ ತಾನೆ ನಿಂದಿತ್ತು ನೋಡಾ!
ತನ್ನಲ್ಲಿಯ ಪ್ರಕೃತಿಯ ತಾನೆ ಹಿಂಗಿಸಲು,
ಅಲ್ಲಿಯೆ ಜ್ಞಾನ ಉದಯಿಸಿತ್ತು!
ಎಲ್ಲಾ ಎಡೆಯಲ್ಲಿ ನಿಂದ ನಿಜಪದವ
ಗುಹೇಶ್ವರಾ ನಿಮ್ಮ ಶರಣ ಬಲ್ಲ.
Hindi Translationनहीं जैसे भाव पर रहे जैसे विचार ;
वहाँ यहाँ न कहते खुद स्थित था देखो।
अपनी प्रकृति खुद नाश करें तो,
वहीं सुज्ञान का उदय हुआ था।
सभी ओर स्थित निज पद को
गुहेश्वरा, तुम्हारा शरण जानता।
Translated by: Eswara Sharma M and Govindarao B N
English Translation
Tamil Translationநிலையற்றதன் மீது ஒரு நிலைத்த பரதத்துவம்
அங்கு இங்கு என்னாது தானே நின்றது காணாய்!
தன் மனத்திலே இயல்பான எண்ணங்களை அகற்றின்
அங்கேயே மெய்ஞ்ஞானம் அரும்பியது
எங்கெங்கும் நிலைத்துள்ள பரம்பொருளை
குஹேசுவரனே, உம் சரணன் அறிவான்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಲ್ಲಿ ಇಲ್ಲಿ ಎನ್ನದೆ = ಎಲ್ಲೆಲ್ಲಿಯೂ; ಅಲ್ಲಿಯೆ = ಆ ಕ್ಷಣವೆ, ತನ್ನೊಳಗೆಯೆ; ಇಲ್ಲವೆ = ನಿತ್ಯವಾಗಿರದ ಜಗತ್ತು, ವಿಶ್ವ; ಉಟೆಂಬ ಪರಿಭಾವ = ನಿತ್ಯಸತ್ಯವಾಗಿರುವ ಪರತತ್ವ್ತ; ಉದಯಿಸಿತ್ತು = ಉಂಟಾಗುತ್ತದೆ; ತನ್ನಲ್ಲಿಯ = ತನ್ನ ಅಂತಃಕರಣದೊಳಗಿರುವ; ತಾನೆ = ಅದು ತಾನೆ, ಆ ಪರವಸ್ತುವೆ; ನಿಂದಿತ್ತು = ನೆಲೆಸಿದೆ; ನಿಜಪದ = ಪರಮ ಸತ್ಯ; ಪ್ರಕೃತಿಯ = ಪ್ರಾಕೃತಿಕ ಭಾವನೆಗಳನ್ನು ಪ್ರಾಕೃತಿಕ ವಸ್ತುಗಳು ನಿತ್ಯ ಮತ್ತು ಸುಖಕರ ಎಂಬ ಕಲ್ಪನೆಗಳನ್ನು; ಮೇಲೆ = ಅದರಾಚೆ; ಸುಜ್ಞಾನ = ಆತ್ಮಜ್ಞಾನ, ಶಾಶ್ವತ ಸತ್ಯವಾದ ಪರಮಾತ್ಮ ಜ್ಞಾನ; ಹಿಂಗಿಸಲು = ಅಡಗಿಸಿದಾಗ; Written by: Sri Siddeswara Swamiji, Vijayapura