•  
  •  
  •  
  •  
Index   ವಚನ - 399    Search  
 
ಮತಿಯೊಳಗೊಂದು ದುರ್ಮತಿ ಹುಟ್ಟಿದ ಬಳಿಕ, ಮತಿಯ ಮರವೆಯೊಳಕೊಂಡು, ಭವಕ್ಕೆ ಗುರಿಮಾಡಿ ಕೆಡಹಿತ್ತು ನೋಡಾ. ಅಖಂಡಿತವ ತಂದು ಮತಿಯೊಳಗೆ ವೇದಿಸಲು, ಗತಿಗೆಟ್ಟು ನಿಂದಿತ್ತು ಗುಹೇಶ್ವರಾ.
Transliteration Matiyoḷagondu durmati huṭṭida baḷika, matiya maraveyoḷakoṇḍu, bhavakke gurimāḍi keḍahittu nōḍā. Akhaṇḍitava tandu matiyoḷage vēdisalu, gatigeṭṭu nindittu guhēśvarā.
Hindi Translation मति मॆं एक दुर्मति पैदा होने पर, मति भूल में मिलकर भव लक्ष्य करके गिरा दिया देखो! अखंडित ज्ञान लाकर मति मॆं भरे तो, भव नाश होकर खडा था गुहेश्वरा। Translated by: Eswara Sharma M and Govindarao B N
Tamil Translation தூய அறிவினில் கீழான அறிவு தோன்றியபின் அறிவினை மறதி சூழ்ந்து கொண்டு பிறவிச் சுழலினுள்ளே கட்டிப் போட்டதன்றோ முழுமையாம் பரம்பொருளின் ஞானத்தை அவன் அறிவினுள்ளே நிலை நிறுத்தியபின் பிறவி அழிந்து நின்றதன்றோ குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಖಂಡಿತವ = ಪರಿಪೂರ್ಣವಾದ ಪರವಸ್ತುವಿನ ಜ್ಞಾನವನ್ನು; ಕೆಡಹಿತ್ತು = ಅಸಹಾಯಕಗೊಳಿಸಿತ್ತು, ಕಟ್ಟಿಹಾಕಿತ್ತು; ಗತಿಗೆಟ್ಟು = ಭವಗೆಟ್ಟು, ಭವಮುಕ್ತನಾಗಿ; ಗುರಿಮಾಡಿ = ಒಳಗುಮಾಡಿ; ತಂದುಮತಿಯೊಳಗೆ ವೇದಿಸ = ಆ ಜೀವಾತ್ಮನ ಮತಿಯೊಳಗೆ ನೆಲೆಗೊಳಿಸಲಾಗಿ; ದುರ್ಮತಿ = ಮಾಯೆ; ನಿಂದಿತ್ತು = ಪರವಸ್ತುವೇ ತಾನಾಗಿ ನಿಲ್ಲುತ್ತಾನೆ(ನಿಂದನು), ಆ ಜೀವ; ಭವಕ್ಕೆ = ಜನ್ಮ-ಮರಣ ಚಕ್ರಕ್ಕೆ; ಮತಿ = ಶುದ್ದವಾದ ಚೇತನ, ಬರಿ ಅರಿವಿನ ಪರವಸ್ತು; ಹುಟ್ಟಿದ ಬಳಿಕ = ಆ ಶುದ್ದ ಆತ್ಮದಲ್ಲಿ ಮಾಯೆ ತಲೆದೋರಿದಾಗ; Written by: Sri Siddeswara Swamiji, Vijayapura