Hindi Translationअज्ञान जैसे पाल ने में ज्ञान नामक शिशु को सुलाकर
सकल वेद शास्त्र नामक रस्सी बाँधकर
पकडे झूलते लोरी गा रही है भ्रांति नामक माँ!
पालना तोडकर रस्सी फाडकर लोरी रुके बिना
गुहेश्वर नामक लिंग नहीं दीख सकता।
Translated by: Eswara Sharma M and Govindarao B N
English Translation
Tamil Translationஅஞ்ஞானமெனும் தொட்டிலிலே, ஞானமெனும் சிசுவைக் கிடத்தி
அனைத்து வேதம், சாத்திரமெனும் கயிற்றைக்கட்டி
அசைத்து தாலாட்டிக் கொண்டுள்ளாள் மருள் என்னும்தாய்!
தொட்டில் முறிந்து கயிறு அறுந்து தாலாட்டு நின்றாலன்றி
குஹேசுவரனெனும் இலிங்கத்தைக் காணவியலாது.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಜ್ಞಾನವೆಂಬ ತೊಟ್ಟಿಲ = ಪರಮ ಆತ್ಮ ವಸ್ತುವಿನ ನಿಜವಾದ ಜ್ಞಾನವಿಲ್ಲದಿರುವಿಕೆಯು ಅಜ್ಞಾನ. ಅದುವೆ ತೊಟ್ಟಿಲು, ಆಶ್ರಯ, ಅದರೊಳಗೆ; ಜೋಗುಳ = ಸಾಂಸಾರಿಕ ವ್ಯಾಮೋಹವು; ಜ್ಞಾನವೆಂಬ ಶಿಶು = ಸ್ವರೂಪವಾದ ಜ್ಞಾನಘನವಾದ, ಆದರೆ ಅಜ್ಞಾನದ ಉಪಾಧಿಯಿಂದ ಅದನ್ನು ಮೆರತ ಜೀವನ ಶಿಶು.; ತೊಟ್ಟಿಲು = ಅಜ್ಞಾನವು; ನಿಂದಲ್ಲದೆ = ಅಳಿದಲ್ಲದೆ; ನೇಣಕಟ್ಟಿ = ನೇಣನ್ನು ಅಜ್ಞಾನಕ್ಕೆ ಜೋಡಿಸಿ; ನೇಣು = ಶಾಸ್ತ್ರಸಂಬಂಧದ ಅಭಿನಿವೇಶವು; ಭ್ರಾಂತಿಯೆಂಬ ತಾಯಿ = ಭೇದಬುದ್ದಿಯೆಂಬ ತಾಯಿಯು; ಮಲಗಿಸಿ = ಈ ಜೀವನನ್ನು ಅಜ್ಞಾನದ ಆಶ್ರಯದಲ್ಲಿಯೇ ಇರಿಸಿ; ಮುರಿದು = ಕೆಟ್ಟುಹೋಗಿ; ಲಿಂಗವ ಕಾಣಬಾರದು = ಪರಮಾತ್ಮ ಲಿಂಗದ ನಿಜ ದರ್ಶನವಾಗದು.; ಸಕಲವೇದಶಾಸ್ತ್ರವೆಂಬ = ಋಗಾದಿ ನಾಲ್ಕು ವೇದಗಳು, ಶಿಕ್ಷಾ ಕಲ್ಪಾದಿ ಆರು ಶಾಸ್ತ್ರಗಳು-ಅವುಗಳ ಅಭಿನಿವೇಶವೆಂಬ; ಹರಿದು = ನಾಶವಾಗಿ; ಹಿಡಿದು ತೂಗಿ ಜೋಗುಳವ = ಆ ಅಜ್ಞಾನಕ್ಕೆ ಗತಿಯನಿತ್ತು ವಿಷಯವ್ಯಾಮೋಹದ ಹಾಡುಗಳ ಹಾಡುತ್ತಾಳೆ.; Written by: Sri Siddeswara Swamiji, Vijayapura