•  
  •  
  •  
  •  
Index   ವಚನ - 461    Search  
 
ಮೋಟರ ಮದುವೆಗೆ ಭಂಡರು ಹರೆಯ ಹೊಯ್ದು, ಮೂಕೊರತಿಯರು ಕಳಸವ ಹೊತ್ತರಲ್ಲಾ! `ಉಘೇ ಚಾಂಗು ಭಲಾ' ಎಂದು ನಿಬ್ಬಣ ನೆರೆದು, ಹೂದಂಬುಲಕ್ಕೆ ಮುನಿವರದೇಕಯ್ಯಾ? ತ್ರಿಜಗವೆಲ್ಲಾ ನಿಬ್ಬಣವಾಯಿತ್ತು, ಗುಹೇಶ್ವರನನರಿಯದ ಹಗರಣವೊ!
Transliteration Mōṭara maduvege bhaṇḍaru hareya hoydu, mūkoratiyaru kaḷasava hottarallā! `Ughē cāṅgu bhalā' endu nibbaṇa neredu, hūdambulakke munivaradēkayyā? Trijagavellā nibbaṇavāyittu, guhēśvarananariyada hagaraṇavo!
English Translation 2 For a wedding of dwarfs rascals beat the drums and whores carry on their heads holy pitchers; with hey-ho's and loud hurrahs they crowd the wedding party and quarrel over flowers and betelnuts; all three worlds are at the party; what a rumpus this is, without our Lord of Caves.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation ठूंठों की शादी में निर्लज्ज डोल बजाकर, नकटी कलश ढोती हैं! उघे चांगु भला कहते बारात इकट्टा होकर तांबूल के लिए नाराज होते हैं क्यों ? त्रिजग बारात डूब गया था। क्या यह घोटाला गुहेश्वर को न जानते हुए? Translated by: Eswara Sharma M and Govindarao B N
Tamil Translation ஊனமுற்றோரின் திருமணத்திற்கு, மானமற்றோர் மத்தளம் கொட்டுகின்றனர். மூக்கற்ற பெண்டிர் கலசத்தை ஏந்தியுள்ளனர். ஊர்வலத்தில் செல்வோர் வெற்றி முழக்கம் எழுப்பி, தாம்பூலத்திற்காக வாதமிடுவது எதற்கோ? மூவுலகும் இவ்வகையில் கொண்டாடி மகிழ்ந்தது குஹேசுவரனை அறியாத குழப்பமோ? Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಘೇ ಚಾಂಗು ಭಲಾ = ಹೀಗೆಂದು ಜಯಘೋಷ ಹಾಕುತ್ತಾರೆ; ಎಂದು = ಈ ರೀತಿಯ; ಕಳಶವ ಹೊತ್ತರಲ್ಲಾ = ಕಳಶವನ್ನು ಹೊರುತ್ತಾರೆ; ನಿಬ್ಬಣ ನೆರೆದು = ಮದುವೆಯ ಮೆರವಣಿಗೆಯಲ್ಲಿ ನೆರೆದವರು; ಭಂಡರು = ಮಾನ-ಮರ್ಯಾದೆ ಇಲ್ಲದವರು; ಮುನಿವರದೇಕಯ್ಯಾ? = ರಾದ್ಧಾಂತ ಮಾಡುತ್ತಾರೆ.; ಮೂಕೊರತಿಯರು = ಮೂಗಿಲ್ಲದ ಕುರೂಪಿ ಹೆಂಗಳೆಯರು.; ಮೋಟರ ಮದುವೆಗೆ = ಅಂಗವಿಕಲರ ಮದುವೆಯಲ್ಲಿ; ಹರೆಯ ಹೊಯ್ದು = ಚರ್ಮವಾದ್ಯ ಬಾರಿಸುತ್ತಾರೆ; ಹೂದಂಬುಲಕ್ಕೆ = ಗೌರವಾತಿಥ್ಯಸೂಚಕವಾದ ಹೂ-ತಾಂಬೂಲಕ್ಕಾಗಿ; Written by: Sri Siddeswara Swamiji, Vijayapura