ವಚನ - 49     
 
ಆನೆಯ ಹೆಣ ಬಿದ್ದಡೆ ಕೋಡಗ ಮುದ್ದಾಡಿಸಿತ್ತ ಕಂಡೆನಯ್ಯಾ ಕಾಡೊಳಗೊಬ್ಬ ಸೂಳೆ ಕರೆದು ಒತ್ತೆಯಾ ಕೊಂಬುದ ಕಂಡೆನಯ್ಯಾ, ಹಾಳೂರೊಳಗೆ ನಾಯ ಜಗಳವ ಕಂಡೆ: ಇದೇನು ಸೋಜಿಗವೋ ಗುಹೇಶ್ವರಾ!