•  
  •  
  •  
  •  
Index   ವಚನ - 504    Search  
 
ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ! ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತಲ್ಲಾ. ರವಿಯ ಶೃತಿಗಳ ರಥದಚ್ಚು ಮುರಿಯಿತ್ತು! ಶಶಿ ವಂಶದ ನಿಲವನು ರಾಹುಗೆದ್ದುದ ಕಂಡು ಹಿರಿಯರುಗಳು ಹೊಲಬುಗೆಟ್ಟರು ಗುಹೇಶ್ವರಾ.
Transliteration Attalittalu kāṇalilla, bayala dhāḷi muṭṭittallā! Saraḷamaṇḍala man̄jina kāḷagattale kaviyittallā. Raviya śr̥tigaḷa rathadaccu muriyittu! Śaśi vanśada nilavanu rāhugedduda kaṇḍu hiriyarugaḷu holabugeṭṭaru guhēśvarā.
Hindi Translation इधर उधर नहीं दीखता, माया आक्रमण हुआ! सरल मंडल मोह अंधकार छा गया। रवि रथ की धुरी टूट गयी। शशि वंश की स्थिति राहू ने जीती देखो बड़े लोग गुमराह हो गये गुहेश्वरा। Translated by: Eswara Sharma M and Govindarao B N
Tamil Translation அங்குமிங்கும் காணவில்லை. மாயையெங்கும் சூழ்ந்தது ஞானப்புலன்களின் மண்டலத்தில் மேகம் கவிந்தது சூரியனுடைய தேரின் அச்சு முறிந்தது தன்மையான அமைதியை ராகு வென்றதைக் கண்டு முன்னோர் வழி தவறினர் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಚ್ಚು ಮುರಿಯಿತ್ತು = ನಿಷ್ಕ್ರಿಯೆಗೊಂಡಿತ್ತು, ಸತ್ಯವನರಿಯಲು ಅಸಮರ್ಥವಾಯಿತ್ತು; ಅತ್ತಲಿತ್ತಲು = ಅಲ್ಲಿ-ಇಲ್ಲಿ, ಎಲ್ಲೆಲ್ಲಿ ನೋಡಿದರೂ; ಕವಿಯಿತ್ತು = ವ್ಯಾಪಿಸಿತ್ತು; ಕಾಣಲಿಲ್ಲ = ಏನೂ ಕಾಣಲೇ ಇಲ್ಲ; ಬಯಲ ಧಾಳಿ = ಮಾಯೆಯ ಮುತ್ತಿಗೆ; ಮಂಜಿನ ಕಾಳಗತ್ತಲೆ = ಮೋಹಮಂಜು ಮುತ್ತಿದಾಗ ಕಾಣಬರುವ ಅಜ್ಞಾನದ ಕಾರ್ಗತ್ತಲೆ; ಮುಟ್ಟಿತ್ತಲ್ಲಾ = ಎಲ್ಲೆಡೆಯೂ ಕಾಣಬಂದಿತ್ತು; ರವಿಯ ರಥ = ಜ್ಞಾನವಾಹಕ ರಥ, ಬುದ್ದಿ; ರಾಹು = ದ್ವೇಷ; ಶಶಿವಂಶದ ನಿಲುವು = ಅಪ್ಯಾಯಮಾನವಾದ ಶೀತಲ ಸ್ಥಿತಿ, ಅಂತಃಪ್ರಶಾಂತಿ, ಶೀತಲವೂ ಪ್ರಸನ್ನವೂ ಆದ ಭಾವ; ಸರಳ ಮಂಡಲ = ಬಾಣಗಳ ಸಮೂಹ, ನೇರವಾಗಿ ವಿಷಯಗಳನ್ನು ನೋಡಬಲ್ಲ, ಗ್ರಹಿಸಬಲ್ಲ ಜ್ಞಾನೇಂದ್ರಿಯ ಮಂಡಲ; ಹೊಲಬುಗೆಡು = ದಾರಿತಪ್ಪು, ದೇವಮಾರ್ಗದಿಂದ ದೂರಾಗು.; Written by: Sri Siddeswara Swamiji, Vijayapura