ಆದಿ ತ್ರೈಯುಗದಲ್ಲಿ ಅಧಿದೇವತೆಗಳು ಮೊದಲಾದ
ದೇವ ದಾನವ ಮಾನವರೆಲ್ಲ
ಮಾಯಾಮೋಹದಲ್ಲಿ ಹುಟ್ಟಿ ತೊಳಲಿ ಬಳಲುತ್ತೈದಾರೆ!
ಆವ ವೇಷವಾದಡೇನು ತಾಮಸಧಾರಿಗಳಿಗೆ?
ಕಾಮ ಕ್ರೋಧ ಲೋಭ ಬಿಡದ ನಾನಾ ವಿಧದ ಡಂಬಕರು!
ಹೂಳದ ಹುಣ್ಣಿಂಗೆ ಆರಯ್ಯಾ ಮದ್ದನಿಕ್ಕುವರು?
ಇದೇನು ಗುಹೇಶ್ವರ? ಸೋರೆಯ ಬಣ್ಣದ ಹಿರಿಯರು!
Hindi Translationआदि तीन युगों में देव-दानव-मानव
माया मोह में पैदा होकर भटकते थक रहे हैं'।
कोई वेष हो ? तामसधारी!
काम क्रोध लोभ बिना छोड़े कई पाखंडी हैं!
बिना घाव भरे व्रण को कौन इलाज करेगा ?
क्या कारण गुहेश्वरा लौकी रंग के बुजुर्ग!
Translated by: Eswara Sharma M and Govindarao B N
English Translation
Tamil Translation யுகங்களின் தொடக்கத்தில் சுரர், அசுரர், மனிதர்கள்
மாயை மோகத்தில் பிறந்து துன்புற்றனர்
எந்த உடலாக இருப்பிலென்ன? அஞ்ஞானத்திலுழன்றனர்
காமம், சினம், உலோபம் மிகுந்த பலவகைப் பகட்டினர்
மாயப் புண்ணிற்கு எவர் மருந்திடுவது?
குஹேசுவரனே, சுரைக்காயனைய பெரியோர்
ஏன் இவ்விதம் உள்ளனர்?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಆದಿ ತ್ರೈಯುಗದಲ್ಲಿ = ತ್ರೈಯುಗದ ಆದಿಯಲಿ; ಕೃತ, ತ್ರೇತಾ, ದ್ವಾಪರ, ಹಾಗೂ ಕಲಿಯುಗದ ಆದಿಯಲಿ; ಏನು ಕಾರಣ = ಯಾವ ಕಾರಣಕ್ಕಾಗಿ; ಡಂಬಕರು = ನಟನೆಗಾರರು, ಆತ್ಮವಂಚಕರು; ತಾಮಸಧಾರಿಗಳು = ಅಜ್ಞಾನಕತ್ತಲೆಗೆ ಒಳಗಾದವರು; ದಾನವ = ಅಸುರ; ದೇವ = ಸುರ; ಮದ್ದು = ಔಷಧಿ; ಮಾಯಾ ಮೋಹದಲ್ಲಿ = ಮಾಯೆ ಹಾಗೂ ಮೋಹಗಳಿಂದಾದ ದೇಹದಲ್ಲಿ; ವೇಷ = ದೇಹ, ದೇಹಾಕೃತಿ; ಸೋರೆಯ ಬಣ್ಣದ ಹಿರಿಯರ = ತಿರುಳೇ ಇಲ್ಲದ, ತೋರಿಕೆಯಲ್ಲಿ ಮಾತ್ರ ಅಂದವಾಗಿರುವ ಸೋರೆಕಾಯಿ ಸದೃಶ ಶಬ್ದಜ್ಞಾನಿಗಳು, ತಪಸ್ವಿಗಳು; ಹೂಳದ = ಮಾಯದ; Written by: Sri Siddeswara Swamiji, Vijayapura