ವಚನ - 513     
 
ದೇವಲೋಕದವರೆಲ್ಲಾ ವ್ರತಗೇಡಿಗಳೆಂಬೆ. ಮರ್ತ್ಯಲೋಕದವರೆಲ್ಲಾ ಭಕ್ತದ್ರೋಹಿಗಳೆಂಬೆ. ದೇವಸಂಭ್ರಮ ಗಣಪದವಿಯ ಕಂಡವರೆಲ್ಲರ ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ. ಅನಂತಶೀಲರ ಕಂಡಡೆ ಕೈಕೂಲಿಕಾರರೆಂಬೆ ಗುಹೇಶ್ವರಾ ಲಿಂಗೈಕ್ಯವನರಿವನರಿಯದೆ ಮರ್ತರವರಾಗಿ.