ಕಾಯದ ಕಳವಳವ ಗೆಲಿದಡೇನೊ,
ಮಾಯದ ತಲೆಯನರಿಯದನ್ನಕ್ಕರ?
ಮಾಯೆಯ ತಲೆಯನರಿದಡೇನೊ,
ಜ್ಞಾನದ ನೆಲೆಯನರಿಯದನ್ನಕ್ಕರ?
ಜ್ಞಾನದ ನೆಲೆಯನರಿದಡೇನೊ,
ತಾನು ತಾನಾಗದನ್ನಕ್ಕರ?
ತಾನು ತಾನಾದ ಶರಣರ ನಿಲವಿಂಗೆ
ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ?
Hindi Translationशरीर की चिंता जीतने से क्या,
माया का सिर नाश किये बिना ?
माया का सिर नाश करे तो क्या,
ज्ञान की स्थिति जाने बिना ?
ज्ञान की स्थिति जाने तो क्या,
आप खुद आप बनने तक?
आप खुद आप शरण की स्थिति को
क्या एक सीमा है गुहेश्वरा?
Translated by: Eswara Sharma M and Govindarao B N
English Translation
Tamil Translationஉடல் விருப்பங்களை வென்றாலென்ன
மாயையின் தலையை அரியாதவரையில்?
மாயையின் தலையை அரிந்தாலென்ன
ஞானநிலையை அறியாதவரையில்?
ஞான நிலையை அறிந்தாலென்ன
தான் தானாகாதவரையில்?
தான் தானாத சரணனின் நிலைக்கு
வரையறைகள் உண்டோ குஹேசுவரனே?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಕಳವಳ = ಚಿಂತೆ, ಆಸೆ; ಜ್ಞಾನದ ನೆಲೆ = ಪರಮ ಆತ್ಮ; ತಲೆಯನರಿ = ನಾಶಗೊಳಿಸು; ಮಾಯೆ = ಅಂತರಂಗದಲಿ ಮನೆಮಾಡಿದ ವಿಷಯವಾಸನೆ; Written by: Sri Siddeswara Swamiji, Vijayapura