•  
  •  
  •  
  •  
Index   ವಚನ - 543    Search  
 
ಆಡುತಾಡುತ ಬಂದ ಕೋಡಗ, ಜಪವ ಮಾಡುವ ತಪಸಿಯ ನುಂಗಿತ್ತಲ್ಲಾ! ಬೇಡ ಬೇಡೆಂದಿತ್ತು, ಮುಂದಣ ಕೇರಿಯ ಮೊಲನೊಂದು! ಮುಂದಣ ಮೊಲನ ಹಿಂದಣ ಕೋಡಗವ ಕಂಬಳಿ ನುಂಗಿತ್ತು ಗುಹೇಶ್ವರಾ.
Transliteration Āḍutāḍuta banda kōḍaga, japava māḍuva tapasiya nuṅgittallā! Bēḍa bēḍendittu, mundaṇa kēriya molanondu! Mundaṇa molana hindaṇa kōḍagava kambaḷi nuṅgittu guhēśvarā.
Hindi Translation खेलते खेलते आया बंदर जप करते तपस्वी को निगला ! आगे की गली का खरगोश नहीं नहीं कह रहा था। आगे केखरगोश को पीछे का बंदर कंबल निगला था गुहेश्वरा । Translated by: Eswara Sharma M and Govindarao B N
Tamil Translation ஆடி ஆடியவாறு வந்த குரங்கு ஜபம் செய்யும் தவசியை விழுங்கியதன்றோ! சாத்துவிக முயல் வேண்டாம் வேண்டாமென்றது பின்னாலுள்ள மனத்தை முன்னாலுள்ள தூயஅறிவினை சிவானுபவம் சூழ்ந்தது குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಡುತಾಡುತ = ಸದಾ ಸಂಚರಿಸುತ್ತ; ಕಂಬಳಿ = ಶಿವಾನುಭೂತಿ; ಕೋಡಗ = ಕಪಿ, ಮನಸ್ಸು; ಜಪವ ಮಾಡುವ = ಶಿವಚಂತೆಯಲ್ಲಿ ತೊಡಗಿದ; ತಪಸಿಯ = ಸಾಧಕ ಜೀವನನ್ನು; ನುಂಗಿತ್ತು = ಕಬಳಿಸಿತ್ತು, ಅವಗ್ರಹಿಸಿ ಪೀಡಿಸಿತ್ತು; ಮುಂದಣ ಕೇರಿಯ = ಸತ್ವಗುಣದ; ಮೊಲನು = ಬುದ್ದಿಯು, ನಿಶ್ಚಯಾತ್ಮಿಕ ಶುದ್ದಬುದ್ದಿಯು; Written by: Sri Siddeswara Swamiji, Vijayapura