•  
  •  
  •  
  •  
Index   ವಚನ - 649    Search  
 
ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ, ಲಿಂಗದ ಅನುಭಾವದ ಮಾತೇಕೊ? ಮಾತಿನ ಮಾತಿನ ಮಹಂತರು ಹಿರಿಯರು! ಗುಹೇಶ್ವರನೆಂಬ ಲಿಂಗಸಾರಾಯವು, ಬಹುಮುಖಿಗಳಿಗೆ ತೋರದು, ತೋರದು.
Transliteration Huṭṭida neleya tr̥ṣṇe biḍadavarige, liṅgada anubhāvada mātēko? Mātina mātina mahantaru hiriyaru! Guhēśvaranemba liṅgasārāyavu, bahumukhigaḷige tōradu, tōradu.
Hindi Translation जन्म स्थान की आशा न छोड़नेवाले को लिंगानुभाव क्यों ? सिर्फ बातें करनेवाले बडे बडे हैं क्या? गुहेश्वर जैसे लिंगानुभाव न दीखता न दीखता मुखियों को ! Translated by: Eswara Sharma M and Govindarao B N
Tamil Translation தோன்றியநிலையின் வேட்கையை விடும்வரையில் இலிங்கத்தை உணரவியலுமோ? பகட்டாகப் பேசுவோர் சிறந்தவரோ? சிறந்தவரோ? குகேசுவரன் எனும் பேரனுபவம் விஷயநாட்டமுடையோருக்குக் கிட்டுமோ? Translated by: Smt. Kalyani Venkataraman, Chennai
ಶಬ್ದಾರ್ಥಗಳು ತೃಷ್ಣೆ = ಲಾಲಸೆ; ಬಹುಮುಖಿ = ಹಲವು ವಿಷಯಗಳಲ್ಲಿ ಕ್ಷಿಪ್ತವಾದ ಮನಸ್ಸುಳ್ಳವ; ಲಿಂಗಸಾರಾಯ = ಲಿಂಗಾನುಭಾವ; ಹುಟ್ಟಿದ ನೆಲೆ = ಶಬ್ದಾದಿವಿಷಯಗಳಿಂದ ತುಂಬಿಹೋದ ಈ ಪ್ರಪಂಚ; Written by: Sri Siddeswara Swamiji, Vijayapura