ವಚನ - 709     
 
ಅಂಗದೊಳಗಣ ಲಿಂಗ, ಲಿಂಗದೊಳಗಣ ಅಂಗ; ಅಂಗ-ಲಿಂಗ ಸಂಗ ಹಿಂಗದಂತೆ ಮಾಡಿರೆ. ದೇವ ದೇವ ಎಂಬಿರಿ ಬಲ್ಲವರು, ಲಿಂಗವ, ಬಲ್ಲವರು ಹಿಡಿದುಕೊಳ್ಳಿರೆ! ತಾ ಸತ್ತು ಲಿಂಗವ ಕೂಡಿಹೆನೆಂದಡೆ ಗುಹೇಶ್ವರಂಗೆ ಬೇರೊಂದು ಠಾವುಂಟೆ ಹೇಳಿರೆ?