ಅಂದಂದಿಗೆ ಬಂದ ಧನವನಂದಂದಿಂಗೆ ವೆಚ್ಚವ ಮಾಡಿ
ಹಿಂದು ಮುಂದ ಸಮವ ಮಾಡಿ,
ಮಧ್ಯ ನಿರಾಳ ಊರ್ಧ್ವ ತಾನಾಗಿದ್ದು ಇಲ್ಲದಂತಿಪ್ಪಡೆ
ಇದೇ ತೆರನು ಕಂಡಯ್ಯಾ.
ಆರ ವಶವಲ್ಲದ ಪುರುಷನೊಬ್ಬನ ಸಾಧಿಸಿಕೊಳಬಲ್ಲಡೆ
ಆ ಹಿರಿಯರಿಬ್ಬರೂ ತನ್ನ ವಶರಪ್ಪರು.
ಆ ಹಿರಿಯರಿಬ್ಬರೂ ತನ್ನವರಾದಡೆ ಸರ್ವವೂ ಸಾಧ್ಯವಪ್ಪುದು.
ಸರ್ವವೂ ಸಾಧ್ಯವಾದಡೆ ತಾನಿಲ್ಲ. ಬಯಲಹುದಕ್ಕೆ ಇದೇ ಚಿಹ್ನ ನೋಡಾ.
ಹೀಗೆಂದು ನಂಬುವುದು,ನಂಬದಿದ್ದಡೆ
ಚೆನ್ನಬಸವಣ್ಣನ ಹೊಣೆಯ ಕೊಡುವೆ ಕಾಣಾ ಗುಹೇಶ್ವರಾ.
Hindi Translationउस दिन उस आये धन उस उस दिन ही व्ययकर,
आगे पीछे बराबर कर,
मध्य निराल ऊर्ध्व खुद बनकर न रहने जैसे
यही रीति देखिये।
किसी के वश में न रहे एक पुरुष प्राप्तकर सके तो
वे दोनों बुजुर्ग अपने वश हो जायेंगे।
वेदोनों बुजुर्ग अपने हो तो सभी साध्य होगा।
सभी साध्य हो तो खुद नहीं।
शून्य होने का यह चिह्न देखा |
ऐसे मानना,
न माने तो चेन्नबसवण्णा की जिम्मेदारी दूँगा देखा गुहेश्वरा ।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura