ವಚನ - 762     
 
ಅನುವನರಿಯದೆ, ಆದಿಯ ವಿಚಾರಿಸದೆ, ಅನಾದಿಯಲ್ಲಿ ತಾನೆರೆಂಬುದ ನೋಡದೆ ಸ್ತೋತ್ರವ ಮಾಡಿ ಫಲವೇನು? `ನಿಶ್ಶಬ್ಧಂ ಬ್ರಹ್ಮ ಉಚ್ಯತೇ' ಎಂಬ ಘನವು ಹೊಗಳತೆಗೆ ಸಿಕ್ಕುವುದೆ ಎಲೆ ಮರುಳುಗಳಿರಾ? ಅನಾದಿಯಲ್ಲಿ ಬಸವಣ್ಣನು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮರ್ತ್ಯಕ್ಕೆ ಬಂದನೊಂದು ಕಾರಣದಲ್ಲಿ. ಬಂದ ಮಣಿಹ ಪೂರೈಸಿತ್ತು ಸಂದ ಪುರಾತರೆಲ್ಲರೂ ಕೇಳಿ, ಇಂದು ನೀವೆಲ್ಲರು ನಿಮ್ಮ ನೀವು ತಿಳಿದು ನೋಡಿ ನಿಜವನೈದುವುದು. ಇನ್ನು ನಮ್ಮ ಗುಹೇಶ್ವರಲಿಂಗಕ್ಕೆಸುರಾಳದ ಸುಳುಹಿಲ್ಲ.