ಅಯ್ಯಾ! ಒಂದು ಕೋಟಿ ವರುಷ
ತಲೆ ಕೆಳಗಾಗಿ ತಪವ ಮಾಡಿದಕಿಂದಲು
ಒಂದು ದಿನ ಶಿವಭಕ್ತರಲ್ಲಿ
ನಿರಹಂಕಾರವಾಗಿರ್ದಡೆ ಸಾಕು ನೋಡಾ.
ಒಂದು ಕೋಟಿ ವರುಷ ಊರ್ಧ್ವಮುಖವಾಗಿ
ಸೂರ್ಯನ ನೋಡಿದ ಫಲವು
ಒಂದು ದಿನ ಸದಾಚಾರ ಸದ್ಧರ್ಮರಪ್ಪ
ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ
ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು
ಒಂದು ದಿನ ಶರಣರಿಗೆ ಶರಣು
ಮಾಡಿದುದಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ಅರವತ್ತಾರು ಕೋಟಿ
ನದಿಗಳ ಮಿಂದು ಮುಡಿಯಿಟ್ಟ ಫಲವು,
ಒಂದು ದಿನ ಸದ್ಭಕ್ತ ಜಂಗಮ ಶರಣಗಣ
ತೀರ್ಥಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ
ಚಾಂದ್ರಾಯಣವ್ರತ ಮೊದಲಾದ
ಸರ್ವವ್ರತಂಗಳ ನಡಸಿದ ಫಲವು
ಒಂದು ದಿನ ಗುರು - ಲಿಂಗ - ಜಂಗಮ - ಪ್ರಸಾದಕ್ಕೆ
ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ವೇದಾಗಮ
ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು
ಒಂದು ದಿನ ಶಿವಭಕ್ತಶರಣರ
ಸಂಭಾಷಣಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ
ಮಹಾಯೋಗವ ಮಾಡಿದ ಫಲವು
ಒಂದು ದಿನ ಶ್ರೀಗುರು ಲಿಂಗ ಜಂಗಮ
ಧ್ಯಾನಕ್ಕೆ ಸರಿಯಲ್ಲ ನೋಡಾ.
ಒಂದು ಕೋಟಿ ವರುಷ ಷೋಡಶ
ಮಹಾದಾನಂಗಳ ಮಾಡಿದ ಫಲವು
ಒಂದು ದಿನ ಸದ್ಧರ್ಮಿ ಶಿವಯೋಗಿಗೆ
ನೀಡಿದ ತೃಪ್ತಿಯ ಮಾಡಿದುದಕ್ಕೆ
ಸರಿಯಲ್ಲ ನೋಡಾ.
ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ
ಸರಿಯಲ್ಲ ನೋಡಾ.
ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು
ಒಂದು ವೇಳೆ ಗುರು-ಲಿಂಗ-ಜಂಗಮಕ್ಕೆ
ದೀರ್ಘದಂಡ ನಮಸ್ಕಾರವ ಮಾಡಿ
ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ.
ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು
ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರಾ].
Hindi Translationअय्या, एक करोड वर्ष सिर नीचाकरके तप करने पर भी
एक दिन शिव भक्तों में निरहंकारी रहे तो काफी देखा।
एक करोड वर्ष ऊर्ध्व मुखी होकर सूर्य देखने का फल
एक दिन सदाचार सद्धर्म जैसे शिवभक्तों को देखने के सम नहीं देखा।
एक करोड वर्ष अखिल देवताओं का स्त्रोत्र करने का फल
एक दिन शरणों को नमस्कार करने के सम नहीं देखा,
एक करोड़ वर्ष छसठ करोड नदियों में नहाकर निर्मल
वस्त्र पहनने का फल
एक दिन के सद्भक्त-जंगम-शरण गण तीर्थ के सम नहीं देखा।
एक करोड़ वर्ष चंद्रायण व्रत आदि सर्व व्रतों को करने का फल
एक दिन के गुरु-लिंग-जंगम-प्रसाद के सम नहीं देखा।
एक करोड़ वर्ष वेदागम पुराणों शास्त्र मंत्र पढने का फल
एक दिन के शिवभक्त शरणों के संभाषण के सम नहीं देखा।
एक करोड वर्ष महायोग करने का फल
एक दिन के श्रीगुरु-लिंग-जंगम ध्यान के सम नहीं देखा।
एक करोड वर्ष षोडश महादान करने का फल
एक दिन सद्धर्मी शिवयोगी को दान देकर तृप्त किये के सम नहीं देखा।
अखिल क्रियाऍ॑ लिंग जंगमार्चन क्रिया के सम नहीं देखा।
योग बल सेसमस्त भोग प्राप्त फल
एक बार गुरु-लिंग-जंगम को दीर्घ दंड नमस्कार कर
सन्निधि में भृत्य बनने के सम नहीं देखा।
प्राण को ब्रह्मरंध्र में छोड़ने का योग
प्राणलिंग संबंध के सम नहीं देखा गुहेश्वरा।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura