ವಚನ - 850     
 
ಅಹುದಹುದು ಕಿಂಕುರ್ವಾಣ! ಮಝ ಭಾಪು! ಬಲ್ಲವರು ಬಲ್ಲೆವೆಂದೆಂಬರೆ? ಲಿಂಗವಂತರ ಮಹಿಮೆ ಈ ಹೀಂಗಿರಬೇಡಾ? ಗುಹೇಶ್ವರನ ಆಪ್ಯಾಯನವಡಗಿಸುವ ಅನುವನು ನೀನಲ್ಲದೆ ಮಹೀತಳದೊಳು ಮತ್ತೆ ಬಲ್ಲವರಾರು? ಹೇಳಾ ಸಂಗನಬಸವಣ್ಣಾ.