•  
  •  
  •  
  •  
Index   ವಚನ - 851    Search  
 
ಅಹುದಹುದು, ಬಸವಣ್ಣಾ ನೀನೆಂದುದನಲ್ಲೆನಬಹುದೆ? ಎನ್ನ ಮನದ ಕಪ್ಪ ಕಳೆದು ನಿರ್ಲೇಪನ ಮಾಡಿ ಎನ್ನ ನಿರವಯಲಲ್ಲಿ ನಿಲಿಸಿ ಪ್ರತಿಷ್ಠೆಯ ಮಾಡುವಾತನು ನೀನೆಂಬುದು ಸತ್ಯವಚನ ನೋಡಾ. ಗುಹೇಶ್ವರನ ಮಹಾಗಣಂಗಳಿದ್ದಲ್ಲಿಗೆ ಹೋಗಿ ತಿಳುಹಿಕೊಂಡು ಬಾರಾ ಸಂಗನಬಸವಣ್ಣಾ.
Transliteration Ahudahudu, basavaṇṇā nīnendudanallenabahude? Enna manada kappa kaḷedu nirlēpana māḍi enna niravayalalli nilisi pratiṣṭheya māḍuvātanu nīnembudu satyavacana nōḍā. Guhēśvarana mahāgaṇaṅgaḷiddallige hōgi tiḷuhikoṇḍu bārā saṅganabasavaṇṇā.
Hindi Translation जीहाँ जीहाँ बसवण्णा तुमने जो कहा उसे न कह सकते? मेरे मन का दोष दूरकर निर्लेपन कर मुझे निरवलय में स्थित कर प्रतिष्ठा करनेवाला तू कहना सत्य वचन देखा। गुहेश्वर के महागणों के पास जाकर समझकर आओ संगनबसवण्णा। Translated by: Eswara Sharma M and Govindarao B N