ಆಚಾರ ಅನಾಚಾರವೆಂದು ಎರಡು ಪ್ರಕಾರವಾಗಿಪ್ಪುದು.
ಆಚಾರವೆಂದಡೆ ಹೇಳಿಹೆ ಕೇಳಿರೊ:
ಸರ್ವಪದಾರ್ಥಂಗಳು ಇದಿರಿದ್ದಲ್ಲಿ
ಆ ಪದಾರ್ಥಂಗಳ ಶುದ್ಧವ ಮಾಡಿ
ಲಿಂಗಕ್ಕೆ ಸಮರ್ಪಿಸುವಲ್ಲಿ ಭೋಜ್ಯಭೋಜ್ಯಕ್ಕೆ
ಶಿವಮಂತ್ರಯುಕ್ತನಾಗಿ ಪ್ರಸಾದಗ್ರಾಹಕನಾಗಿರಬಲ್ಲಡೆ
ಆತನೆ ಪ್ರಸಾದಿ, ವೀರಮಾಹೇಶ್ವರನೆಂಬೆ.
ತಟ್ಟುವ ಮುಟ್ಟುವ ತಾಗು[ವ] ನಿರೋಧವೆಲ್ಲವನು
ಹಲ್ಲುಕಡ್ಡಿ ದರ್ಪಣ ಮೊದಲಾದ ಸರ್ವವ್ಯವಹಾರದಲ್ಲಿ
ಆವುದಾನೊಂದು ಭೋಗಿಸಲು,
ಆವುದಾನೊಂದು ಕ್ರೀಡಿಸಲು
ಲಿಂಗವೆ ಪ್ರಾಣವಾಗಿರಬಲ್ಲಡೆ
ಆ ಮಹಾಂತನೆ ಸರ್ವಾಚಾರಸಂಪನ್ನನೆಂಬೆ.
ಅಂತಪ್ಪ ಮಹಾತ್ಮನ ತ್ರಿವಿಧಮುಖವನರಿದು ಕರುಣಪೂರಿತನಾಗಿ
ಪ್ರಸಾದವ ಕೊಂಡಡೆ ಪಾವನವೆಂಬೆ
ಆತನ ಕೇವಲ ಮಹಾನುಭಾವ
ಪರಮಜ್ಞಾನಪರಿಪೂರ್ಣನೆಂಬೆ,
ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ ಗುಹೇಶ್ವರಾ.
Transliteration Ācāra anācāravendu eraḍu prakāravāgippudu.
Ācāravendaḍe hēḷihe kēḷiro:
Sarvapadārthaṅgaḷu idiriddalli
ā padārthaṅgaḷa śud'dhava māḍi
liṅgakke samarpisuvalli bhōjyabhōjyakke
śivamantrayuktanāgi prasādagrāhakanāgiraballaḍe
ātane prasādi, vīramāhēśvaranembe.
Taṭṭuva muṭṭuva tāgu[va] nirōdhavellavanu
hallukaḍḍi darpaṇa modalāda sarvavyavahāradalliĀvudānondu bhōgisalu,
āvudānondu krīḍisalu
liṅgave prāṇavāgiraballaḍe
ā mahāntane sarvācārasampannanembe.
Antappa mahātmana trividhamukhavanaridu karuṇapūritanāgi
prasādava koṇḍaḍe pāvanavembe
ātana kēvala mahānubhāva
paramajñānaparipūrṇanembe,
ā mahātmane traijagadoḍeyanembe guhēśvarā.
Hindi Translation आचार अनाचार जैसे दो प्रकार हैं।
आचार कहें तो कहूँगा सुनिए:_
सर्वपदार्थ सामने रहे तो उन पदार्थों को शुद्धकर
लिंग को समर्पित करते समय खाने योग्य
शिवमंत्र युक्त होकर प्रसाद ग्राहक बना रहे तो
उसी को प्रसादी, वीर माहेश्वर कहूँगा।
थपकना, छूना, लगना, सब निरोध को
घास का तिनका, दर्पण आदि सर्व व्यवहार में
किसी एक को भोग करने, किसी एक को क्रीड़ा करने
लिंग ही प्राण होने से उस महांत को ही सर्वाचार संपन्न कहूँगा।
ऐसे महात्मा के त्रिविध मुख जानकर करुणापूरित होकर
प्रसाद लेने से पावन कहूँगा।
उसे सिर्फ महानुभाव परम ज्ञान परिपूर्ण कहूँगा।
उसी महात्मा को त्रिजग मालिक कहूँगा गुहेश्वरा।
Translated by: Eswara Sharma M and Govindarao B N