•  
  •  
  •  
  •  
Index   ವಚನ - 9    Search  
 
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ! ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು! ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ, ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ ನಿರ್ದೋಷಿಯಾದೆನು ಕಾಣಾ, ಗುಹೇಶ್ವರಾ.
Transliteration Tale illada taleyātaṅge karuḷillada oḍalu nōḍā! Ā nallaṅge aṅgavillada aṅgane satiyāgippaḷu! Ivaribbara basuralli huṭṭidaḷem'ma tāyi nā huṭṭi, tāya kaiviḍidu saṅgava māḍi nirdōṣiyādenu kāṇā guhēśvarā.
Hindi Translation सिर रहित सिरवाले को बिना आँत शरीर देखो ! उस प्रेमी को बिना शरीरवाली अंगना सति है ; इन दोनों के गर्भ से पैदा हुई मेरी माता ! मैं जन्म लेकर माँ का हाथ पकड़ संसर्ग से निर्दोषि हुआ देखो गुहेश्वरा । Translated by: Eswara Sharma M and Govindarao B N
Tamil Translation அவனுக்குத் தலையற்ற தலை உறுப்பற்ற வடிவம் காணாய்! அவனுக்கு உருவமற்ற சக்தி மனைவியாயினள்! இவர்கள் இருவரின் இணைவால் சித்சக்தி தோன்றினள் நான் பிறந்து தாயின் கரம்பற்றி என்னையறிந்து களங்கமற்றவன் ஆனேன் காணாய் குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗನೆ = ಶಕ್ತಿ; ಅಂಗವಿಲ್ಲದ = ನಿರಾಕಾರವಾದ; ಒಡಲು = ಸ್ವರೂಪ; ಕರುಳು = ಅವಯವ; ತಲೆ = ಚೈತನ್ಯ; ತಲೆಯಿಲ್ಲದ = ಭೇದಜ್ಞಾನವಿಲ್ಲದ; ಹುಟ್ಟಿ = ದೇಹಸ್ಥಲದಲ್ಲಿ ಅವತರಿಸಿ ಗುರುವಿನ ಹಸ್ತದಲ್ಲಿ ಹುಟ್ಟಿ; Written by: Sri Siddeswara Swamiji, Vijayapura