ಆದಿ ಸ್ವಯಂಭುವಿಲ್ಲದ ಮುನ್ನ,
ಸಂಗನಿಸ್ಸಂಗವಿಲ್ಲದ ಮುನ್ನ,
ನಕ್ಷತ್ರಗ್ರಹಂಗಳಿಲ್ಲದ ಮುನ್ನ,
ಯೋಗ ಕರಣಂಗಳಿಲ್ಲದ ಮುನ್ನ,
ಖೇಚರ ಭೂಚರರಿಲ್ಲದ ಮುನ್ನ,
ಆರಾರೂ ಇಲ್ಲದ ಮುನ್ನ,
ಆಕಾಶ ಮಾರುತರಿಲ್ಲದ ಮುನ್ನ,
ಅಂಬುಧಿ ಕಮಠರಿಲ್ಲದ ಮುನ್ನ,
ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ
ಹಿಮಕರದಿನಕರ ಸುಳುಹಿಲ್ಲದ ಮುನ್ನ,
ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ,
ಗುಹೇಶ್ವರನಿರ್ದ ತನ್ನ ತಾನರಿಯದಂತೆ.
Hindi Translationबिना आदि स्वयंभू के पहले, बिना संग निस्संग के पहले,
बिन नक्षत्र ग्रहों के पहले, बिना योग करणों के पहले,
बिना खेचर भूचरों के पहले, कोई न रहने के पहले,
बिना आकाश मारुत के पहले, बिना अंबुधि कूर्म के पहले,
बिना हरिब्रद्मादियों की स्थिति के पहले,
बिना हिमकर दिनकर के सूझ के पहले
गुहेश्वर अपने आप न जानने जैसे रहा था।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura