•  
  •  
  •  
  •  
Index   ವಚನ - 923    Search  
 
ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ, ಚಕೋರನ ಧ್ಯಾನವೆಂತಿಪ್ಪದು-ಅಂತಾಗಿದ್ದೆ ನಾನು. ಮಾತೆ ವಿಯೋಗವಾದ ಶಿಶುವಿನ ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು. ಬಂಧನದಲ್ಲಿ ಸಿಕ್ಕಿದ ಫಣಿಯ ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು. ರಾತ್ರಿಯೊಳು ಮುಳುಗಿದ ಪದ್ಮದ ಭ್ರಮರನ ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು. ಸ್ವಪ್ನದಲ್ಲಿ ದುಷ್ಟ ಕೇಸರಿಯ ಧ್ಯಾನದ ಮದಹಸ್ತಿ ಎಂತಿಪ್ಪುದು-ಅಂತಾಗಿದ್ದೆ ನಾನು. ನೋಟವಗಲಿದ ನೇಹದ ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು. ಬ್ರಹ್ಮಪಾಶ ವಿಷ್ಣುಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು. ಗುಹೇಶ್ವರಲಿಂಗವೆ, ಸಂಗನಬಸವಣ್ಣನೊಳಗೆ ಲೀಯವಹ ಭರದಲ್ಲಿ ಏನೆಂದರಿಯದಿದ್ದೆ ನಾನು.
Transliteration Induvina beḷagina sampattanimbugoṇḍa, cakōrana dhyānaventippadu-antāgidde nānu. Māte viyōgavāda śiśuvina dhyānaventippudu-antāgidde nānu. Bandhanadalli sikkida phaṇiya dhyānaventippudu-antāgidde nānu. Rātriyoḷu muḷugida padmada bhramarana dhyānaventippudu-antāgidde nānu. Svapnadalli duṣṭa kēsariya dhyānada madahasti entippudu-antāgidde nānu. Nōṭavagalida nēhadaDhyānaventippudu-antāgidde nānu. Brahmapāśa viṣṇumāyavanatigaḷeda chaladalli ēnendariyadidde nānu. Guhēśvaraliṅgave, saṅganabasavaṇṇanoḷage līyavaha bharadalli ēnendariyadidde nānu.
Hindi Translation चंद्र के प्रकाश की संपत्ती को अपनाये चकोर के ध्यान जैसा था वैसा था मैं। माता से वियोगी शिशु ध्यान जैसा था वैसा था मैं। बंधन में फसे सर्प के ध्यान जैसा था वैसा था मैं। रात में डूबे पद्‌म के भ्रमर का ध्यान जैसा था वैसा था मैं । स्वप्न में दुष्ट केसरी के ध्यान के मदहस्ती है जैसा था वैसा था मैं। विरह के स्नेह के ध्यान जैसा था वैसा था मैं ब्रह्म पाश, विष्णु माया निरादार करने छल में मैं कुछ भी नहीं जानता था। गुहेश्वर लिंग ही संगनबसवण्णा में लीन करने की जल्दी में मैं कुछ भी नहीं जानता था। Translated by: Eswara Sharma M and Govindarao B N