ಇದಿರ ಭ್ರಮಿತನು ಭಕ್ತನಲ್ಲ,
ಲೋಕೋಪಚಾರಿ ಜಂಗಮವಲ್ಲ.
ಹೇಳಿಹೆನು ಕೇಳಿರಣ್ಣಾ:
ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ
ಸಹ ಶಿವಸ್ವರೂಪ ಕಾಣುತ್ತ,
ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು
ಮನಹರುಷದಲ್ಲಿ ಭೋಜನವ
ಮಾಡಿಸೂದೀಗ ಭಕ್ತಂಗೆ ಲಕ್ಷಣ.
ಕಾಡೊಳಗಿರಲಿ ಊರೊಳಗಿರಲಿ
ಮಠದಲ್ಲಿರಲಿ ಮನೆಯಲ್ಲಿರಲಿ
ಲಿಂಗವಂತರು ಕರೆಯಬಂದರೆ,
ಹೋಗಬೇಕೆಂಬ ಅಭಿಲಾಷೆಯುಳ್ಳಡೆ,
ತಾನಿದ್ದಲ್ಲಿ ತಾ ಮಾಡುವಂಥ
ಅಷ್ಟವಿಧಾರ್ಚನೆ ಷೋಡಶೋಪಚಾರ
ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ
ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ,
ಭಕ್ತರಾಶ್ರಯದಲ್ಲಿ ಭೋಜನವ
ಮಾಡುವುದೀಗ ಜಂಗಮಕ್ಕೆ ಲಕ್ಷಣ.
ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ
ಜಂಗಮಕ್ಕೆ ಹೇಳುವ ಅರಿವು
ಕೊರಮಜೀವಿಯಂತಾಯಿತ್ತಾಗಿ-
ಇದು ಕಾರಣ ಲೋಕೋಪಚಾರಿಗಳಾಗಿ
ಒಡಲ ಹೊರೆವವರ
ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ
ಅವರ ಒಲ್ಲನಯ್ಯಾ.
Hindi Translationभ्रमित हुआ भक्त नहीं, लोकोपचारी जंगम नहीं,
कहता हूँ सुनिये भाइयों-
जंगम प्रेमी हो तो भस्म, रुद्राक्षी सहित शिवस्वरुप दिखता,
नमस्कार कर आवाहन कर आये,
मन हर्ष से भोजन बनाने भक्त का लक्षण है।
जंगल में हो, गाँव में हो,मठ में हो, घर में हो
लिंगवंत बुलाने आये तो जाना चाहिए जैसि अभिलाषा हो तो
खुद जहाँ हो खुद करने जैसे अष्टविधार्चना, शोडशोपचार,
लिंग क्रिया, नित्यनेम के बाद
फिर खुद जाकर अपना गुट बिना दिखाये भक्तों के आश्रय में
भोजन बनाना जंगम का लक्षण ।
वैसे नहीं तो गृहस्ताश्रम में क्रिया करे तो
जंगम से कहने का ज्ञान नीच जीवी जैसे रहने से-
इस कारण लोकोपचारी बने पेट पालनेवालों को
हमारा गुहेश्वरलिंग जानने से उनको नहीं मानता अय्या ।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura