ವಚನ - 971     
 
ಎನ್ನ ಕರಸ್ಥಲದೊಳಗೊಂದು ಮಹಾಬೆಳಗ ಕಂಡೆನಯ್ಯಾ! ಇದು ಮಹಾ ಮಂಗಳನಿಳಯವಾಗಿ ತೋರುತ್ತಿದೆ! ಗುಹೇಶ್ವರನೆಂಬ ಲಿಂಗದ ಕಂಗಳ ಕಾಂತಿಗಳು ಸಂಗನಬಸವಣ್ಣನ ನಿವಾಳಿಸುತ್ತಿದ್ದವಯ್ಯಾ!