ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ,
ಎಣ್ಣೆಗೆ ಪರಿಮಳ ವೇಧಿಸದು.
ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ
ಪ್ರಾಣಲಿಂಗ ಸಂಬಂಧವಾಗದು.
ಇದು ಕಾರಣ, ನಮ್ಮ ಗುಹೇಶ್ವರಲಿಂಗದಲ್ಲಿ
ಇಷ್ಟಲಿಂಗ ಸಂಬಂಧಿಯಾದಲ್ಲದೆ,
ಪ್ರಾಣಲಿಂಗ ಸಂಬಂಧಿಯಾಗಬಾರದು,
ಕಾಣಾ ಸಿದ್ಧರಾಮಯ್ಯಾ.
Transliteration Eḷḷiṅge parimaḷava kaṭṭidallade,
eṇṇege parimaḷa vēdhisadu.
Dēhadalli iṣṭaliṅga sthāpisidallade
prāṇaliṅga sambandhavāgadu.
Idu kāraṇa, nam'ma guhēśvaraliṅgadalli
iṣṭaliṅga sambandhiyādallade,
prāṇaliṅga sambandhiyāgabāradu,
kāṇā sid'dharāmayyā.
Hindi Translation तिल में परिमल न मिलाये तो,
तेल में परिमल न होता (न घटता)?
देह में इष्टलिंग स्थापना करने के बिना
प्राणलिंग का संबंध नहीं होता ।
इस कारण हमारे गुहेश्वर लिंग में
इष्टलिंग संबंध न हो तो, प्राण लिंग संबंध नहीं होता है ।
देख सिद्धरामय्या ।
Translated by: Eswara Sharma M and Govindarao B N