ವಚನ - 992     
 
ಏನಯ್ಯಾ, ನಿನ್ನ ನೊಸಲಲ್ಲಿ ಕಣ್ಣು, ಮನದಲ್ಲಿ ವಿರಸ, ನುಡಿವುದೆಲ್ಲವೂ ಭಕ್ತಿರಸ! ಜ್ಞಾನವೆಂತು ಹೇಳಾ? ನಿರಹಂಕಾರವೆಂತು ಹೇಳಾ? ಅರುಹಿನ ಕುರುಹಿನ ಮರವೆ ಮಾತಿನೊಳಗದೆ, ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ? ಕುರುಹಳಿದು ಕುರುಹನರಿಯ ಬಲ್ಲಡೆ ಗುಹೇಶ್ವರಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ, ಕಾಣಾ ಮಡಿವಾಳ ಮಾಚಯ್ಯಾ.