ಜಾತಿ ಶೈವರು ಅಜಾತಿ ಶೈವರೆಂದು
ಎರಡು ಪ್ರಕಾರವಾಗಿಹರಯ್ಯಾ.
ಜಾತಿ ಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯಾ.
ಅಜಾತಿ ಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯಾ.
ಜಾತಿ ಶೈವರೆಂಬರು ಸರ್ವಭೋಗಂಗಳ ಬಯಸಿ ಮಾಡುವರಾಗಿ,
ದ್ದಾರೇ ಯಸ್ಸ ಚ , ಮಾತಂಗೋ ವಾಯುವೇಗ ತುರಂಗಮಃ|
ಪೂರ್ಣೆಂದು ವದನಾ ನಾರೀ ಶಿವಪೂಜಾ ವಿಧೇಃ ಫಲಂ ||
ಎಂದುದಾಗಿ, ಇವು ಜಾತಿಶೈವರಿಗೆ ಕೊಟ್ಟಭೋಗಂಗಳಯ್ಯಾ.
ಅಜಾತಿಶೈವರು ಗುರುಗಲಿಂಗಜಂಗಮಕ್ಕೆ ತನುಮನಧನವ ನಿವೇದಿಸಿ
ಸರ್ವಸೂತಕರಹಿತರಾಗಿಹರಯ್ಯಾ.
ಅಹಂ ಮಾಹೇಶ್ವರ ಪ್ರಾಣೇ ಮಾಹೇಶ್ವರೋ ಮಮ ಪ್ರಾಣಃ|
ತಥ್ಯೆಕಂ ನಿಕ್ಕ್ರೀಯಂ ಭೂಯಾದನ್ಯಲ್ಲಿಂಗೈಕ್ಯಮೇವ ಚ ||
ಇದು ಕಾರಣ ಸರ್ವೇಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿ ಕಾಯನೆಂಬೈಕ್ಯಪದವನು ಅ ಜಾತಿಶೈವರಿಗೆ ಕೊಡುವನಯ್ಯಾ.
Art
Manuscript
Music
Courtesy:
Transliteration
Jāti śaivaru ajāti śaivarendu
eraḍu prakāravāgiharayyā.
Jāti śaivarembavaru śivaṅge bhōgastrīyarayyā.
Ajāti śaivarembavaru śivaṅge kulastrīyarayyā.
Jāti śaivarembaru sarvabhōgaṅgaḷa bayasi māḍuvarāgi,
ddārē yas'sa ca, mātaṅgō vāyuvēga turaṅgamaḥ|
pūrṇendu vadanā nārī śivapūjā vidhēḥ phalaṁ ||
endudāgi, ivu jātiśaivarige koṭṭabhōgaṅgaḷayyā.
Ajātiśaivaru gurugaliṅgajaṅgamakke tanumanadhanava nivēdisi
sarvasūtakarahitarāgiharayyā.
Ahaṁ māhēśvara prāṇē māhēśvarō mama prāṇaḥ|
tathyekaṁ nikkrīyaṁ bhūyādan'yalliṅgaikyamēva ca ||
idu kāraṇa sarvēśvara cennamallikārjunayyanu
bhakti kāyanembaikyapadavanu a jātiśaivarige koḍuvanayyā.