Index   ವಚನ - 1    Search  
 
ತನು ಉಡುಗಿ ಮನ ಉಡುಗಿ ಧ[ನ ಉಡುಗಿ] ನಾಚಿ ಮಾಡಬಲ್ಲಡೆ, ನಾಚನೆಂದೆಂಬೆ. ನಾಚಿದೆ ಮಾಡುವ ನೀಚರು ನೀವು ಕೋಚಿಯಾಗದೆ, ಯಾಚಕತನವ ಬಿಟ್ಟು, ಆಚರಿಸಿ, ಆಗೋಚರನ ಗೋಚರಿಸಿ, ನಿಷ್ಠಾನಿಷ್ಠೆಯಿಂ ವ್ಯವಹರಿಸಬೇಡ. ಊಟವೊಂದಲ್ಲದೆ ಮಾರೂಟ ಕೋರೂಟವನುಣ್ಣೆ. ಉಡಿಗೆವೊಂದಲ್ಲದೆ ಮಾರುಡಿಗೆ ಮೀರುಡೆಗೆಯನು [ಡೆ] ಉಂಡುಟ್ಟೆನಾದಡೆ ಎನ್ನ ಹೊದ್ದಿದಾರುಸ್ಥಲದ ಧೂಳಣ್ಣಗಳು ನಗುವರು ಕಾಣಾ, ಮಾರುಡಿಗೆಯ ನಾಚೇಶ್ವರಾ.