ಗುರುವು ಮನದಲ್ಲಿ ಮಂತ್ರವನ್ನೂ,
ತನುವಿನಲ್ಲಿ ಲಿಂಗವನ್ನೂ ಸ್ಥಾಪಿಸಿ,
ಕರುಣರಸವನೆರೆಯಲಾಮಂತ್ರವು ಜಿಹ್ವೆಯಲ್ಲಂಕುರಿಸಿ,
ಶರೀರವನಾವರಿಸಲಾ ಶರೀರದ ಭೂತತ್ವವಳಿದು,
ಮಂತ್ರವೇ ಶರೀರವಾಯಿತ್ತು.
ಲಿಂಗವು ನೇತ್ರದಲ್ಲಂಕುರಿಸಿ, ಮನಮನಾವರಿಸಿ,
ಮನದ ಅಹಂಕಾರವಂ ತೊಲಗಿಸಿ, ಆ ಮನವೇ ಲಿಂಗವಾಯಿತ್ತು.
ಮಂತ್ರವೇ ತನುವಾಗಿ ಮನವೇ ಲಿಂಗವಾದಲ್ಲಿ,
ನಾಮಮಧ್ಯದಲ್ಲಿ ಪುರುಷನಿರ್ಪಂತೆ
ಮಂತ್ರಮಧ್ಯದಲ್ಲಿ ಲಿಂಗವಿರ್ಪುದು ಸಹಜಮಾಯಿತ್ತು .
ತನುಮನೋಮಧ್ಯದಲ್ಲಿರ್ಪ
ಪ್ರಾಣಲಿಂಗವು ಮಂತ್ರದಲ್ಲಿ ಲೀನಮಾಯಿತ್ತು.
ಮಂತ್ರದಲ್ಲಿ ಜಾಗ್ರ ಲಿಂಗದಲ್ಲಿ ಸುಷುಪ್ತಿ ನೆಲೆಗೊಂಡು,
ಪ್ರಪಂಚವೆಲ್ಲಾ ಸ್ವಪ್ನಸ್ವರೂಪಮಾಗಿ,
ಮಂತ್ರದಲ್ಲಿ ಜ್ಞಾನವು, ಲಿಂಗದಲ್ಲಿ ಆನಂದವು,
ಈ ಎರಡರ ಸಂಗವೇ ನಿಜವು,
ನಿಜವೇ ತಾನಾಗಿ, ತನ್ನಿಂದನ್ಯವೇನೂ ಇಲ್ಲದುದೆ
ಕೇವಲ ಕೈವಲ್ಯವೆನಿಸುವುದು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Guruvu manadalli mantravannū,
tanuvinalli liṅgavannū sthāpisi,
karuṇarasavanereyalāmantravu jihveyallaṅkurisi,
śarīravanāvarisalā śarīrada bhūtatvavaḷidu,
mantravē śarīravāyittu.
Liṅgavu nētradallaṅkurisi, manamanāvarisi,
manada ahaṅkāravaṁ tolagisi, ā manavē liṅgavāyittu.
Mantravē tanuvāgi manavē liṅgavādalli,
nāmamadhyadalli puruṣanirpante
mantramadhyadalli liṅgavirpudu sahajamāyittu.
Tanumanōmadhyadallirpa
prāṇaliṅgavu mantradalli līnamāyittu.
Mantradalli jāgra liṅgadalli suṣupti nelegoṇḍu,
prapan̄cavellā svapnasvarūpamāgi,
mantradalli jñānavu, liṅgadalli ānandavu,
ī eraḍara saṅgavē nijavu,
nijavē tānāgi, tannindan'yavēnū illadude
kēvala kaivalyavenisuvudu kāṇā
mahāghana doḍḍadēśikāryaguruprabhuve.