Index   ವಚನ - 77    Search  
 
ಪಂಚಭೂತಂಗಳಂ ಮೀರಿರ್ಪ ಆತ್ಮರಾರೆಂದು ತಿಳಿವುದೆಂತೆಂದೊಡೆ: ಸಾಮ್ಯವಸ್ತುವಿನಿಂದ ಗೋಚರಮಲ್ಲಮಾಗಿ ತನ್ನಲ್ಲಿ ತಾನೇ ತಿಳಿಯಬೇಕು. ಧೈರ್ಯವಂ ತಾಳಿ, ವೈರಾಗ್ಯವೆಂಬ ಖಡ್ಗವಂ ಪಿಡಿದು, ಆ ಸೂಕ್ಷ್ಮ ಮಾರ್ಗದಲ್ಲಿ ನಿಶ್ಶಂಕೆಯಿಂ ತಾನೊಬ್ಬನೇ ಪ್ರವೇಶಿಸಿ, ಭಾವವೆಂಬ ಮಹಾಬಯಲೊಳಗೆ ಗಮಿಸುತ್ತಾ, ಮಿಥ್ಯಾಪ್ರಪಂಚನಡಗಿಸಿ, ನಿಜವಂ ಹೊಂದಿ, ತತ್ವಾಮೃತವಂ ಪೀರಿ, ನಲಿವುತ್ತಿರ್ಪ ಪ್ರಮಥಗಣಂಗಳಂ ನೋಡಿ ಪಾಡಿ ಮಣಿದು ಕುಣಿದು ತತ್ಪ್ರಸಾದಾಮೃತವಂ ಸವಿದು, ಮಹಾತೃಪ್ತಿಸ್ಥಾನದಲ್ಲಿ ಸ್ವಪ್ನದಲ್ಲಿ ತಾನು ಪಟ್ಟ ಭ್ರಮೆಯು ಜಾಗ್ರದಲ್ಲಿ ತನಗೆ ಅಪಹಾಸ್ಯಮಪ್ಪಂತೆ, ತನ್ನಲ್ಲಿ ತಾನೇ ಲಯಿಸುತ್ತಾ, ಮಹಾಲಿಂಗವೇ ನಾನಾಗಿರ್ಪ ಸುಖವಂ ಕಾಲವಿಳಂಬವನೆಸಗದೆ ನನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.