Index   ವಚನ - 80    Search  
 
ಸತ್ಯಸ್ವರೂಪಮಾದ ಬಸವೇಶ್ವರನೇ ಭಕ್ತನು, ಜ್ಞಾನಸ್ವರೂಪಮಾದ ಚನ್ನಬಸವೇಶ್ವರನೇ ಗುರುವು, ಆನಂದಸ್ವರೂಪಮಾದ ಅಲ್ಲಮಪ್ರಭುವೇ ಜಂಗಮ. ಇಂತಪ್ಪ ಗುರು ಜಂಗಮ ಭಕ್ತರೆಂಬ ಮಹಾನದಿಗಳು ತ್ರಿಪಥಗಾಮಿನಿಗಳಾಗಿ, ಮಚ್ಛರೀರವೆಂಬ ಕಾಶೀಕ್ಷೇತ್ರದಲ್ಲಿ ಪರಿದು ಪವಿತ್ರಮಂ ಮಾಡಿ, ನನ್ನ ಹೃದಯವೆಂಬ ಮಣಿಕರ್ಣಿಕಾಸ್ಥಾನದೊಳ್ಮೂರೊಂದಾಗಿ ಕೂಡಲು, ಸತ್ಯವೇ ಕಂಠ, ಜ್ಞಾನವೇ ಗೋಮುಖ, ಆನಂದವೇ ಗೋಳಾಕಾರಮಾಗಿರ್ಪ ಮಹಾಲಿಂಗವೆಂಬ ತ್ರಿವೇಣಿಸಂಗಮದಲ್ಲಿ ನಾಂ ಮುಳುಗಿ, ನಿರ್ವಾಣದಲ್ಲಿ ಮುನ್ನಿನಂತಿದ್ದೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.