Index   ವಚನ - 39    Search  
 
ಕಾಲವಿರಹಿತ ಗುರುವಾಗಬೇಕು. ಕರ್ಮವಿರಹಿತ ಲಿಂಗವಾಗಬೇಕು. ಭವವಿರಹಿತ ಜಂಗಮವಾಗಬೇಕು. ಮೂರನರಿತು ಛೇದಿಸಿ, ವಿರಕ್ತನಾಗಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.