Index   ವಚನ - 47    Search  
 
ಕ್ರೀಭಾವಶುದ್ಧತೆ ಆದವನಿರವು, ಬೆಂಕಿ ಕಾಷ್ಠವ ಕೂಡಿ, ದ್ವಂದ್ವವಾಗಿ ಉರಿದು, ಹಿಂಗಿ ನಂದಿದಂತಿರಬೇಕು. ಹುಳಿ ಸಿಹಿಯ ಕೂಡಿ, ಕೂಟಸ್ಥದಿಂದ ಉಳುಮೆಯ ಘೃತದಂತಿರಬೇಕು. ವಿಷ ಶರೀರದಲ್ಲಿ ವೇಧಿಸಿ, ದೆಸೆಯನಳಿದಂತಿರಬೇಕು. ಅಗ್ನಿಯಲ್ಲಿ ಅರತ ಉದಕದಂತೆ, ಬಯಲೊಳಡಗಿದ ಶಬ್ದದಂತೆ ಇರು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.