Index   ವಚನ - 59    Search  
 
ದ್ವೈತವಳಿದು ಅದ್ವೈತವಾಗಬೇಕು. ಜ್ಞಾನವಳಿದು ಕ್ರೀಯಲ್ಲಿ ನಿಂದು, ದಿವ್ಯ ಜ್ಞಾನವಾಗಬೇಕು. ಹಾಲು ಒಗುವಲ್ಲಿ ನೀರ ಬೆರಸಿದಂತೆ, ಅದು ಹೊತ್ತುವುದಕ್ಕೆ ವಾರಿ ನಿಂದಂತಾಗಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.