ಭಕ್ತನಾದಲ್ಲಿ ಪಂಕವ ಹೊದ್ದದ ವಾರಿಯಂತಿರಬೇಕು,
ಜಲವ ಮುಟ್ಟದ ತೈಲದಂತಿರಬೇಕು,
ರಸಬದ್ಧ ಯೋಗದಂತಿರಬೇಕು,
ಮರಾಳನ ಮಾಟದಂತೆ, ಸಂಸಾರದ ಒದಗನರಿತು
ಅರಿಯದಂತಿರಬೇಕು,
ಐಘಟದೂರ ರಾಮೇಶ್ವರಲಿಂಗದಲ್ಲಿ.
Art
Manuscript
Music
Courtesy:
Transliteration
Bhaktanādalli paṅkava hoddada vāriyantirabēku,
jalava muṭṭada tailadantirabēku,
rasabad'dha yōgadantirabēku,
marāḷana māṭadante, sansārada odaganaritu
ariyadantirabēku,
aighaṭadūra rāmēśvaraliṅgadalli.