ಸ್ಥೂಲದಿಂದ ಕಾಬುದು,
ಸೂಕ್ಷ್ಮದಿಂದರಿವುದು,
ಕಾರಣದಲ್ಲಿ ಮಾಡುವುದು.
ತ್ರಿವಿಧದ ಭೇದವ ನಿಃಕರಿಸಿ, ತ್ರಿವಿಧ ಭೇದದಿಂದ ಕಾಣು.
ತ್ರಿವಿಧದ ಭೇದವ ಕೂಡಿ ಮರೆ.
ಐಘಟದೂರ ರಾಮೇಶ್ವರಲಿಂಗವ ಏನೂ ಎನ್ನದಿರು.
Art
Manuscript
Music
Courtesy:
Transliteration
Sthūladinda kābudu,
sūkṣmadindarivudu,
kāraṇadalli māḍuvudu.
Trividhada bhēdava niḥkarisi, trividha bhēdadinda kāṇu.
Trividhada bhēdava kūḍi mare.
Aighaṭadūra rāmēśvaraliṅgava ēnū ennadiru.