Index   ವಚನ - 15    Search  
 
ಎಸುವರ ಬಲ್ಲೆ; ಎಚ್ಚ ಬಾಣ ತಿರುಗಿ ಬಪ್ಪಂತೆ ಎಸುವರ ಕಾಣೆ. ಪೂಜಿಸುವವರ ಬಲ್ಲೆ; ಪೂಜಿಸಿದ ಲಿಂಗ ಅಭಿಮುಖವಾಗಿ ಸರ್ವಾಂಗದಲ್ಲಿ ವೇಧಿಸುವರ ಕಾಣೆ. ನುಡಿಗೆ ನಡೆ, ಆ ನಡೆಗೆ ನುಡಿ ಉಭಯವ ವೇಧಿಸುವರ ಕಾಣೆ. ಈ ಉಭಯವು ಸಿದ್ಧಿಯಾಗಿ ಸಿದ್ಧಾಂತವಾದಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಕ್ರೀ ಜ್ಞಾನ ನಿರುತವಾದವಂಗಲ್ಲದೆ ಸಾಧ್ಯವಿಲ್ಲ.