Index   ವಚನ - 16    Search  
 
ಏನೇನು ಎನಲಿಲ್ಲದ ನಿರಾಲಯದಿಂದಾಯಿತ್ತು ಸಹಜ. ಆ ಸಹಜದಿಂದಾಯಿತ್ತು ಸೃಷ್ಟಿ,ಸೃಷ್ಟಿಯಿಂದಾಯಿತ್ತು ಸಂಸಾರ, ಸಂಸಾರದಿಂದಾಯಿತ್ತು ಅಜ್ಞಾನ, ಅಜ್ಞಾನದಿಂದಾಯಿತ್ತು ಮರವೆ. ಆ ಮರವೆಯಿಂದವೆ ಜ್ಞಾನರತ್ನವ ಮರೆದು ತಾಮಸಕ್ಕೊಳಗಾದಲ್ಲಿ ನಾನೀನೆಂಬ ಅಹಂಕಾರ ತಲೆದೋರಿತ್ತು. ಆ ಅಹಂಕಾರದಿಂದ ಸೀಮೆಗೆಟ್ಟು ದುಷ್ಕರ್ಮಕ್ಕೀಡಾಗಿ ನೀನೆಂಬುದ ಮರೆದೆನಯ್ಯಾ. ಇನ್ನು ಕೃಪೆಯಮಾಡು, ಕೃಪೆಯ ಮಾಡು ಶಿವಧೋ ಶಿವಧೋ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.