Index   ವಚನ - 23    Search  
 
ಕಾಯವಿಹನ್ನಕ್ಕ ಕರ್ಮವ ಬಿಟ್ಟ ಪರಿ ಇನ್ನೆಂತೊ? ಜೀವವಿಹನ್ನಕ್ಕ ಅರ್ಪಿಸದೆ ತಾನುಂಬ ಪರಿ ಇನ್ನೆಂತೊ? ಕೋಳದೊಳಗೆ ಕಾಲಿದ್ದು ಕೋಲಹಿಡಿದು ಸಾಧನೆಯ ಮಾಡುವನ ತೆರನಂತೆ, ಕರ್ಮಕಾಂಡಿಯಾಗಿ ತಾನಿರುತ್ತ ಇದಿರಿಗೆ ವರ್ಮವ ಬೋಧಿಸಲೇತಕ್ಕೆ? ಇದು ನನ್ನಿಯ ಇರವಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನು ಅವರಿಗೆ ಅನ್ಯನಾಗಿಪ್ಪನು.