ತುಷರಸವಿದ್ದುದಕ್ಕಲ್ಲದೆ ಫಲ ಫಲಿಸಲಿಲ್ಲ.
ಕ್ರಿಯಾಸದ್ಭಾವವಿದ್ದಲ್ಲದೆ ಸತ್ಪಥಭಾವಿಯಲ್ಲ.
ತ್ರಿಸಂಧ್ಯಾಕಾಲಂಗಳಲ್ಲಿ ಉಚಿತ ವೇಳೆಯನರಿತು
ರಾಜಸ ತಾಮಸಂಗಳಿಲ್ಲದೆ ಪರಸೇವೆ ನಿಶ್ಚಯವಂತನಾಗಿ,
ಅನಲ ಅಹಿ ವ್ಯಾಘ್ರ ಚೋರ ರಾಜಭಯ ಮುಂತಾದುವೆಲ್ಲವ
ಲಿಂಗ ಕರಸ್ಥಲಕ್ಕೆ ಬಂದಿರಲಿಕ್ಕಾಗಿ,
ಆ ಲಿಂಗದ ಮೂರ್ತಿ ಮನಸ್ಥಲದಲ್ಲಿ
ನಿರತಿಶಯದಿಂದ ನಿಂದಿರಲಿಕ್ಕಾಗಿ,
ಇಂತೀ ಭಾವಂಗಳೆಲ್ಲವು ಮೂರ್ಛೆಯಲ್ಲಿ ಮೂರ್ತಿಗೊಂಡು
ಅಮೂರ್ತಿಯಪ್ಪ ವಸ್ತು ಭಿನ್ನಭೇದವಿಲ್ಲದೆ
ಸ್ವಯ ಕ್ರಿಯಾಪೂಜೆ ಸರ್ವಜ್ಞಾನ ಸಂತೋಷ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಕ್ರಿಯಾಸಂಭವಕೂಟ.
Art
Manuscript
Music
Courtesy:
Transliteration
Tuṣarasaviddudakkallade phala phalisalilla.
Kriyāsadbhāvaviddallade satpathabhāviyalla.
Trisandhyākālaṅgaḷalli ucita vēḷeyanaritu
rājasa tāmasaṅgaḷillade parasēve niścayavantanāgi,
anala ahi vyāghra cōra rājabhaya muntāduvellava
liṅga karasthalakke bandiralikkāgi,
ā liṅgada mūrti manasthaladalli
niratiśayadinda nindiralikkāgi,
intī bhāvaṅgaḷellavu mūrcheyalli mūrtigoṇḍu
amūrtiyappa vastu bhinnabhēdavillade
svaya kriyāpūje sarvajñāna santōṣa.
Ennayyapriya im'maḍi niḥkaḷaṅka mallikārjunanalli
kriyāsambhavakūṭa.